ಕಂಚಲದೇವಿ : ಕಲ್ಯಾಣಿ ಚಾಳುಕ್ಯ ದೊರೆ ಎರಡನೆಯ ಸೋಮೇಶ್ವರ ಭುವನೈಕಮಲ್ಲನ (1068-1076) ಹಿರಿಯ ಹೆಂಡತಿ.  ಪೆರಿಯರಸಿ ಕಂಚಲದೇವಿ ಮೂಲಗುಂದ ನಾಡನ್ನು ಆಳುತ್ತಿದ್ದಳೆಂಬುದಾಗಿ ಪ್ರ.ಶ. 1072 ರ ಗುಡಿಗೇರಿ ಶಾಸನದಿಂದ ತಿಳಿದುಬರುತ್ತದೆ. (ನೋಡಿ- ಸೋಮೇಶ್ವರ-2).	(ಜಿ.ಆರ್.ಆರ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ